ಮಲ್ಗೊವಾಗ ತುಂಬ ಇಷ್ಟಪಟ್ಟೋರಿಗೆ "ಶುಭ ರಾತ್ರಿ" (good night) ಅಂತ ಕಳ್ಸ್ದೆಹೋದ್ರೆ ನಿದ್ರೆನೆ ಬರಲ್ಲ ಅನ್ನೋ ಶಹಜಾನ್ ಗಳಿಗೆ ಇದೊಂದು ಸಣ್ಣ ಪುಟ್ಟ ಕವಿತೆ....
ನಡು ರಾತ್ರಿ ಬಾರದ ನಿದ್ದೆಯ ಜೊತೆಗೆ
ಮನದಲ್ಲೊಂದು ಸಣ್ಣ ಮಾತುಕತೆ
ಮಾತಾಡುತಿರುವಳು ಪರಿಚಿತೆ ನನಗೆ
ತಿಳಿಯದೆ ಈ ರಾತ್ರಿ ಹೀಗಾಗುತಿದೆ ಯಾಕೆ
ತೂಕಡಿಸಿದರು ಬಿಡದಿಹದು ಆ ಮಾತುಕತೆ
ಎಚ್ಚರಿಸಿ ಮರೆಯಾಗುತಿದೆ ಪ್ರತಿ ಘಳಿಗೆ
ನೆನಪುಗಳು ಕಾಣುತಿಹುದು ಒಳಮಾಳಿಗೆ ಮೇಲೆ
ಪುಟ ತಿರುಗಿ ಮರೆಯಾಗುತಿದೆ ಹಾಗಾಗೆ..
ನೆನಪಾಗಿ ನಾನೊಮ್ಮೆ ಎದ್ದು ಬಿಟ್ಟೆ
ಕಳುಹಿಸಿದೆ ಶುಭರಾತ್ರಿಯ ಸಂದೇಶವ ನಿನಗೆ
ಮರುನಿಮಿಷವೆ ಪ್ರತ್ಯುತ್ತರವು ಬಂದಿತು ನನಗೆ
ತುಟಿಯಲ್ಲಿ ಅರಳಿದ ನಗುವೊಂದಿಗೆ
ಕಣ್ಮುಚ್ಚಲು ಹೇಳಿತು ನನಗೆ ನಿದ್ರೆ..
ಧೀಮಂತ್ (ಅನಾತ್ಮೀಯ)