ಮುಳುಗುವ ರವಿಗೊಂದು ಯೋಚನೆ
ನಾ ಮುಳುಗಿದ ಮೇಲೆ ಭುವಿಯ ಬೆಳಗುವವರು ಯಾರೆಂದು?
ಅದಕೇನು ಗೊತ್ತು ಚಂದಿರನ ಮಂದಹಾಸವು
ಮಾನವನ ಬೆಳಕಿನ ಇತಿಹಾಸವು
ದೂರದ ದಿಗಂತದಲಿ ಮರೆಯಾಗುತ
ತನ್ನೊಳಗೆ ಸುಮ್ಮನೆ ಯೋಚಿಸುತ
ಕೇಳಿತು ನರ್ತಿಸುವ ಸಾಗರಕೆ
ನಾ ಮರೆಯಾದ ಮೇಲಿನ ಕಥೆಯೇನೆಂದು
ಈಗ ಹೇಗಿರುವರೋ ಹಾಗೆ ಇರುವರು
ಆದರೂ ರಾತ್ರಿಯ ಮುದ್ದಿಸುವರು ತುಸು ಹೆಚ್ಚು
ಭುವಿಯ ಪ್ರೀತಿಸುವ ಬೆಳದಿಂಗಳು
ಮನೆಯ ಮುತ್ತಿಡುವ ವಿದ್ಯುತ್ತ್ ದೀಪವು
ಕೊರಗಿಸದು ಯಾರನು
ಮಲುಗಿರುವರು ಎಲ್ಲರು,
ನಿಶಾಚರಿಗಳನು ಬಿಟ್ಟು
ಉಳಿದಂತೆ ಹಾಗೇ ಇನ್ನು ಮಿಕ್ಕಿದ್ದು
ಮಾತು ಮುಗಿದ ನಂತರ
ಸಾಗರದ ಸಮಾಚಾರವ ಕೇಳಿ
ಸೂರ್ಯನು ಮುಳಿಗಿದ
ಇನ್ನೆಲ್ಲೋ ಬೆಳಗಲು
ಅನಾತ್ಮೀಯ (ಧೀಮಂತ್)