Powered By Blogger

Monday, 3 December 2018

ಊಹಾಲೋಕ






ಇದ್ದಲ್ಲೇ ಕಳೆದುಹೋಗೊ ಚಾಳಿಯು ಬಂದಾಗಿದೆ
ಊಹಾಲೋಕವು ನನಗಾಗಿ ಕಾಯೊ ಪರಿಯಾಗಿದೆ

ಸುಂದರ ಸನ್ನೆ ಮನದಾಳದಿ ಕೂತು
ಕನಸಿನ ಪುಟವ ಬರೆಯುತಿದೆ
ಮರೆತಿರುವ ಆ ಏನೋ ಒಂದನ್ನು
ನೆನಪು ಮಾಡಿ ನೋವಿಲ್ಲದ ಗಾಯವಾಗಿದೆ

ಸುತ್ತಮುತ್ತವೆಲ್ಲ ಮಾಯವಾಗಿ ಬಿಟ್ಟು
ಹೊಸದೊಂದು ಆಯಾಮದಲ್ಲಿ ಇರುವಂತಾಗಿದೆ
ಉಸಿರನ ಸದ್ದು ಸಂಗೀತವು ಆಗಿ
ಆಡುವ ಮಾತೆ ಹಾಡಾಗಿದೆ

ಇರುವುದೆಲ್ಲಾ ಬಿಟ್ಟು ಎಲ್ಲಾ ಮರೆತುಕೊಂಡು
ಸದಾ ನಿನ್ನ ನೋಡೋ ಮನಸಾಗಿದೆ
ಹೊರಗಿನ ಅರಿವು ನೆನಪೆಯಾಗದೆ
ಕಾಣುವ ಕನಸು ಖುಷಿ ನೀಡಿದೆ

ಇದ್ದಲ್ಲೇ ಕಳೆದುಹೋಗೊ ಚಾಳಿಯು ಬಂದಾಗಿದೆ
ಊಹಾಲೋಕವು ನನಗಾಗಿ ಕಾಯೊ ಪರಿಯಾಗಿದೆ


ಧೀಮಂತ್ (ಅನಾತ್ಮೀಯ)


ಚಿತ್ರದ ಕೊಡುಗೆ : ಉಮೇಶ್ ಮೋಹನ್