Powered By Blogger

Friday, 8 December 2017

ಸ್ವಾಗತ

pic credit: google


ನೋಡಲು ತುಸು ಬಿಳುಪು
ನಯನವ ಕಾಯುವ ಕನ್ನಡಕವು
ಅಂದವ ಹೆಚ್ಚಿಸುವ ಕಾಡಿಗೆಯು
ಹುಬ್ಬುಗಳ ನಡುವಲ್ಲೊಂದು
ಕಡುಕಪ್ಪು ಬಿಂದಿಯು
ಕೊರಳ ಸರವ ನಾಚಿಸುವ
ಬೆಳ್ಳಿಯ  ನೂಪುರವು
ಮರೆಯಲು ಹೋದರು
ಮರೆಯಲಾಗದ ವೈಶಿಷ್ಟ್ಯವು

ಒಮ್ಮೆ ಮಾತಾಡಿದಳು
ಏನಾಗಬೇಕು ಹೇಳಿಯಂದು
ಮನೋಹರವಾದ ಮಾತನು ಕೇಳಿ
ನೋಡೊ ಕಣ್ಣ್ಗಳು
ಎನಗೆ ಹೇಳಿತು ಮಗದೊಮ್ಮೆ
ಮಾತನಾಡಲಿ ಅವಳು ಇನ್ನೊಮ್ಮೆ
ಕೇಳೋ ಕಿವಿಗಳು ಕೂಡ
ನೋಡ ಬಯಸಿತು ಆ ಮಾತುಗಳನು

ಏನಿಲ್ಲವೆಂದು ನಾ
ಮುಂದೆ ಹೋದೆ ನಡೆದು
ಅವಳಲ್ಲೇ ನಿಂತಿದ್ದಳು
ಬಂದವರನ್ನು ಸ್ವಾಗತಿಸುತ
ನನ್ನ ಹೃದಯ  ಬಯಸುತ್ತಿತ್ತು
ಅವಳ ಸ್ವಾಗತವ


ಅನಾತ್ಮೀಯ(ಧೀಮಂತ್)

Sunday, 1 October 2017

ಕಪ್ಪೆ ಚಿಪ್ಪು

ಮಲ್ಗೊವಾಗ ತುಂಬ ಇಷ್ಟಪಟ್ಟೋರಿಗೆ "ಶುಭ ರಾತ್ರಿ" (good night)  ಅಂತ ಕಳ್ಸ್ದೆಹೋದ್ರೆ ನಿದ್ರೆನೆ ಬರಲ್ಲ ಅನ್ನೋ ಶಹಜಾನ್ ಗಳಿಗೆ ಇದೊಂದು ಸಣ್ಣ ಪುಟ್ಟ ಕವಿತೆ....



ನಡು ರಾತ್ರಿ ಬಾರದ ನಿದ್ದೆಯ ಜೊತೆಗೆ
ಮನದಲ್ಲೊಂದು ಸಣ್ಣ ಮಾತುಕತೆ
ಮಾತಾಡುತಿರುವಳು ಪರಿಚಿತೆ ನನಗೆ
ತಿಳಿಯದೆ ಈ ರಾತ್ರಿ ಹೀಗಾಗುತಿದೆ ಯಾಕೆ

ತೂಕಡಿಸಿದರು ಬಿಡದಿಹದು ಆ ಮಾತುಕತೆ
ಎಚ್ಚರಿಸಿ ಮರೆಯಾಗುತಿದೆ ಪ್ರತಿ ಘಳಿಗೆ
ನೆನಪುಗಳು ಕಾಣುತಿಹುದು ಒಳಮಾಳಿಗೆ ಮೇಲೆ
ಪುಟ ತಿರುಗಿ ಮರೆಯಾಗುತಿದೆ ಹಾಗಾಗೆ..

ನೆನಪಾಗಿ ನಾನೊಮ್ಮೆ ಎದ್ದು ಬಿಟ್ಟೆ
ಕಳುಹಿಸಿದೆ ಶುಭರಾತ್ರಿಯ ಸಂದೇಶವ ನಿನಗೆ
ಮರುನಿಮಿಷವೆ ಪ್ರತ್ಯುತ್ತರವು ಬಂದಿತು ನನಗೆ
ತುಟಿಯಲ್ಲಿ ಅರಳಿದ ನಗುವೊಂದಿಗೆ
ಕಣ್ಮುಚ್ಚಲು ಹೇಳಿತು ನನಗೆ ನಿದ್ರೆ..


ಧೀಮಂತ್  (ಅನಾತ್ಮೀಯ)

Saturday, 9 September 2017

ಅನುರಾಗ


  

 ಹೃದಯಕೆ ಕೇಳಿಸಿದೆ 
   ನೀ  ನಡೆದ ಹೆಜ್ಜೆಯ ಸದ್ದು
ನಗದಿರು ನೀನೆಂದು
ಮುಚ್ಚದು ತೆರೆದ ಈ ಕಣ್ಣುಗಳು

ಕೋಗಿಲೆ ನೀನಾದೆ ಹಾಡದೇನೆ
ಮೆಚ್ಚಿಕೊಂಡೆ ನಾ ಅದನು ಕೇಳದೇನೆ
ನವಿಲು ನೀಯಾದೆ ಕುಣಿಯದೇನೆ
ಗ್ರಹಿಸಿದೆ ನಾ ಅದನು ನೋಡದೇನೆ

ಅಂಬರವ ಅಂದಗೊಳಿಸುವ ಚುಕ್ಕಿಯನ್ನು
ಹಿಡಿದು ಕೊಡುವೆ ನಿನಗೆ ಉಡುಗೊರೆಯಾಗಿ
ಸಾಗರದೊಳಗೊಂದು ಅರಮನೆಯ ಮಾಡಿ
ಬೆಳದಿಂಗಳ ರಾತ್ರಿಯಲಿ ಪ್ರಸ್ತಾಪಿಸುವೆ
ನನ್ನ ಮನದಾಳದ ಅನುರಾಗ

                                                                            ಧೀಮ೦ತ್ (ಅನಾತ್ಮೀಯ)

Thursday, 17 August 2017

ಯಾರು ಆಗಮಿಸದ ನಿಲ್ದಾಣದಲಿ

THE OLD STATION
ಯಾರು ಆಗಮಿಸದ ನಿಲ್ದಾಣದಲಿ
ನಾ ಕುಳಿತುಕೊಂಡಿರುವೆ ಒಬ್ಬನೆ

ಮುತ್ತಿಕ್ಕುವ ಮಳೆಹನಿ ಜೊತೆಗೂಡಿ
ಪರಿಮಳ ಸೂಸುವ ಈ ಧರೆಯು
ಮೂಡಿಸಿದೆ ನಿನ್ನ ಹಾಜರಿಯು

ಎಲ್ಲೋ ಪಕ್ಕದಲಿ ಆಗುವ ಸಪ್ಪಳವು
ಹುಡುಕಿಸಿತು ನನ್ನನ್ನು ನೀನೆಂದು
ಯಾವುದೋ ಮೂಲೆಯಲ್ಲಿ ಹುಟ್ಟುವ ಸದ್ದು
ಹೇಳುತಿದೆ ಅದುವೆ ನೀನೆಂದು
ಮೈ ಸವರುವ ತಿಳಿಸಂಜೆ ಗಾಳಿಯು
ನೆನೆಪಿಸುತಿದೆ ನಿನ್ನ ಬಿಡದೆ ಇಂದು
ತಿಳಿವಳಿಕೆಯು ನನಗೆ ಕಡಿಮೆಯಾಗಿಹುದು
ತಿಳಿಯದು ನನಗೆ ಯಾಕಿಂದು...


ಚಂದಿರನು ಮೇಲೆದ್ದು ಕತ್ತಲನು ಅಲಂಕರಿಸಿ
ಬೀದಿ ದೀಪಗಳು ದಾರಿಯನು ಬೆಳಗಿದರು
ಮುಂದಿರುವ ಮುಗಿಯದ ದಾರಿಯನು ನೋಡುತ
ಯಾರು ಆಗಮಿಸದ ನಿಲ್ದಾಣದಲಿ
ನಾ ಕುಳಿತುಕೊಂಡಿರುವೆ ಒಬ್ಬನೆ.

                                                                                      ಧೀಮಂತ್

Wednesday, 2 August 2017

ಶಾಬ್ದಿಕ




❤❤❤

ಎಚ್ಚರಿಕೆಯ ಘಂಟೆಯು ಬಾರಿಸಿದೆ
ನನಗೇನೂ ಮಾಹಿತಿಯ ನೀಡದೆ,
ಆಘಾತವಾಗೆ ಬಿಡುವುದು ಈ ಹೃದಯಕೆ
ನೀ ನಗುತ ನಡೆದು ಬಂದರೆ,
ಮಾಯವಾಯಿತು ಈ  ಜಗವು
ನನ್ನನು ನಿನ್ನ ಬಳಿ ಬಿಟ್ಟು,
ನೀ ಆಡೋ ಮಾತುಗಳ ನಾ ಅರಿವೆ
ನಿನ್ನ  ತುಟಿಯ ಚಲನೆ ಗಮನಿಸಿಯೆ,
ನನಗಂತು ನೀ ಅತಿಸುಂದರ
ಶುರುಮಾಡಿದೆ ನನ್ನಲ್ಲೊಂದು ಮಂದಿರ
ಅದರೋಳಗೆ ನಿನ್ನ ಆರಾಧಿಸುವ ಏಕೈಕ ಭಕ್ತನು ನಾ.
          
                                                                                                                                      ಧೀಮಂತ್



Saturday, 22 July 2017

ಪ್ರೇಮಗವನ

💕😍😍😍💕

















ಕಾರಣವಿಲ್ಲದೆ ನೆನಪಿಗೆ ಬಂದೆ ನೀ ಏತಕೆ
ಬೇಡವೆಂದರು ಕಾಣುತಿಹುದು ನೀ ಮುಡಿದ ಮಲ್ಲಿಗೆ
ಸದ್ದು ಮಾಡದೆ ಏದೆಯ ನೀ ಆವರಿಸಿದೆ
ಗದ್ದಲ ಮಾಡದೆ ನೀ ಅಲ್ಲೆ ಬೇರೂರಿದೆ
ನಿನ್ನ ಸುಂದರ ಮೆಲುನಗೆಗೆ
ಮಂದಹಾಸ ಬೀರಿದ ಮದನನು ನಾ
ಆಗುತಿಹುದು ಮುಜುಗರವು ನನಗೆ
ಕೆಂಪು ಗುಲಾಬಿಯ  ನೀಡಲು ನಿನಗೆ
ಇದನೋದಿದರೆ ನೀನೆನಾದರು ಹೇಳಿಬಿಡು ಒಮ್ಮೆಗೆ.....