THE OLD STATION |
ಯಾರು ಆಗಮಿಸದ ನಿಲ್ದಾಣದಲಿ
ನಾ ಕುಳಿತುಕೊಂಡಿರುವೆ ಒಬ್ಬನೆ
ಮುತ್ತಿಕ್ಕುವ ಮಳೆಹನಿ ಜೊತೆಗೂಡಿ
ಪರಿಮಳ ಸೂಸುವ ಈ ಧರೆಯು
ಮೂಡಿಸಿದೆ ನಿನ್ನ ಹಾಜರಿಯು
ಎಲ್ಲೋ ಪಕ್ಕದಲಿ ಆಗುವ ಸಪ್ಪಳವು
ಹುಡುಕಿಸಿತು ನನ್ನನ್ನು ನೀನೆಂದು
ಯಾವುದೋ ಮೂಲೆಯಲ್ಲಿ ಹುಟ್ಟುವ ಸದ್ದು
ಹೇಳುತಿದೆ ಅದುವೆ ನೀನೆಂದು
ಮೈ ಸವರುವ ತಿಳಿಸಂಜೆ ಗಾಳಿಯು
ನೆನೆಪಿಸುತಿದೆ ನಿನ್ನ ಬಿಡದೆ ಇಂದು
ತಿಳಿವಳಿಕೆಯು ನನಗೆ ಕಡಿಮೆಯಾಗಿಹುದು
ತಿಳಿಯದು ನನಗೆ ಯಾಕಿಂದು...
ಚಂದಿರನು ಮೇಲೆದ್ದು ಕತ್ತಲನು ಅಲಂಕರಿಸಿ
ಬೀದಿ ದೀಪಗಳು ದಾರಿಯನು ಬೆಳಗಿದರು
ಮುಂದಿರುವ ಮುಗಿಯದ ದಾರಿಯನು ನೋಡುತ
ಯಾರು ಆಗಮಿಸದ ನಿಲ್ದಾಣದಲಿ
ನಾ ಕುಳಿತುಕೊಂಡಿರುವೆ ಒಬ್ಬನೆ.
ಧೀಮಂತ್